ಸ್ಮಶಾನವಾಸಿ
ಆಸ್ವಾದಿಸುವ ಪ್ರಕೃತಿಯ
ಅನುಭವಿಸುವ ಕ್ರೂರಿಗಳು
ಗಿಡಮರ ಕಾಯಿಪಲ್ಲೆಗಳು
ಪ್ರಾಣಿಪಕ್ಷಿ ಚಂದ್ರತಾರೆಗಳು
ಎಲ್ಲದರಲ್ಲೂ ಲಾಭವೆಣಿಸುವಿರಿ
ಹಿಂಡಿ ಹೀರಿ ನಿಸ್ಸಾರವಾದೊಡನೆ
ಒಗೆದು ತುಳಿದು ಮುನ್ನಡೆಯುವಿರಿ
ಕದುಪಾಪಿಗಳು ನೀವು
ಅಮಾನವೀಯ ಮಾನವರು...
ನಿಮಗೆಲ್ಲ ಅಪವಾದ ನಾನು
ಸ್ಮಶಾನ ಕಾಯುವವನು
ನಿರ್ಲೋಭಿ, ನಿರ್ಮೋಹಿ,
ನಿಸ್ವಾರ್ಥಿ!
ಬಡಿದಾಡಿ ನೀವೆಲ್ಲರೂ
ಸಂಗ್ರಾಮವಾಗಲಿ ನಿಮ್ಮಲ್ಲಿ
ಸತ್ತುಹೋಗಿ ಸ್ವಾರ್ಥಿಗಳೇ
ನಿಮ್ಮೆಲ್ಲರನೂ ಹೂತುಬಿಡುವೆ
ಕಡುಬಡವ ನಾನು
ಹಸನಾಗಲೆನ್ನ ಬದುಕು...
ಆಸ್ವಾದಿಸುವ ಪ್ರಕೃತಿಯ
ಅನುಭವಿಸುವ ಕ್ರೂರಿಗಳು
ಗಿಡಮರ ಕಾಯಿಪಲ್ಲೆಗಳು
ಪ್ರಾಣಿಪಕ್ಷಿ ಚಂದ್ರತಾರೆಗಳು
ಎಲ್ಲದರಲ್ಲೂ ಲಾಭವೆಣಿಸುವಿರಿ
ಹಿಂಡಿ ಹೀರಿ ನಿಸ್ಸಾರವಾದೊಡನೆ
ಒಗೆದು ತುಳಿದು ಮುನ್ನಡೆಯುವಿರಿ
ಕದುಪಾಪಿಗಳು ನೀವು
ಅಮಾನವೀಯ ಮಾನವರು...
ನಿಮಗೆಲ್ಲ ಅಪವಾದ ನಾನು
ಸ್ಮಶಾನ ಕಾಯುವವನು
ನಿರ್ಲೋಭಿ, ನಿರ್ಮೋಹಿ,
ನಿಸ್ವಾರ್ಥಿ!
ಬಡಿದಾಡಿ ನೀವೆಲ್ಲರೂ
ಸಂಗ್ರಾಮವಾಗಲಿ ನಿಮ್ಮಲ್ಲಿ
ಸತ್ತುಹೋಗಿ ಸ್ವಾರ್ಥಿಗಳೇ
ನಿಮ್ಮೆಲ್ಲರನೂ ಹೂತುಬಿಡುವೆ
ಕಡುಬಡವ ನಾನು
ಹಸನಾಗಲೆನ್ನ ಬದುಕು...
ತಪ್ಪಿರುವ ಹಾದಿಯಲ್ಲಿ ಸರಿಯಾಗಿ ನಡೆಯುವುದೇ ತಂತ್ರಜ್ಞಾನ!!
ಕಾಲೇಜಿನಲ್ಲಿ ethics ಬಗ್ಗೆ ತಿಳಿಸುವಾಗ ನನ್ನಲಿ ಮೂಡಿದ ಧ್ವಂಧ್ವದ ಕೂಸೇ ಈ ಕವಿತೆ.. ನಾಲ್ಕು ವರ್ಷ ಕಲಿತದ್ದು ಏತಕ್ಕೆ ಎಂಬ ತರ್ಕವೇ ಮುನ್ನುಗ್ಗಿ ಕವಿತೆಯಾಯಿತು.. ಸರಿ-ತಪ್ಪುಗಳನ್ನು ಮುಂದಿಟ್ಟು ದಾರಿ ಕಂಡುಕೊಳ್ಳಿ ಅಂತ ಹೇಳಿ ಕಾಲೇಜಿಂದ ಹೊರಹಾಕಿಬಿಟ್ಟರು...!!!