September 30, 2009


ಬಣ್ಣ ಬಣ್ಣದ ತೊಗಲು
ಕಂಡು ಬೆರಗಾಗ ಬೇಡ,
ನನ್ನವಲ್ಲ ಇದು.
ರೇಷಿಮೆಯ ಹೊಳಪು
ಕಂಡು ಮೆಚ್ಚಬೇಡ,
ನಿಜವಲ್ಲ ಇದು.


ಬರುವೆಯಾದರೆ ಬಾ
ನಿನಗಾಗಿ ಕಾಯುವೆನು.
ಬಣ್ಣಗಳ ತೊಳೆದು,
ಬಟ್ಟೆಯ ಕಳಚಿ,
ಅಲಂಕಾರವ ಅಳಸಿ,
ಬೆತ್ತಲಾಗುವೆನು.
ಒಳ ಹೊರಗು ಒಂದಾಗಿ
ಕಲೆತು ನಿನ್ನ ಸೇರುವೆನು.


ಬೆಚ್ಚಿ ದೂರಾಗದಿರು
ಕೃತ್ರಿಮವ ಮೆಚ್ಚಿರುವೆ
ವಿಕೃತಿಯಲ್ಲ, ಪ್ರಕೃತಿಯಿದು
ಅಸಹಜತೆಯ ಹಿಂದಿನ
ಸಹಜ ಸೌಂದರ್ಯವಿದು.
ಅರಿಯಲು ಬಂದ
ನಿನಗೆನ್ನ ಕಾಣಿಕೆಯಿದು


ಈ ಕವಿತೆ ಬರೆದು ಹಲವು ದಿನಗಳಾಗಿವೆ. ಇದಕ್ಕೊಂದು ಹೆಸರಿಲ್ಲದೆ ನನ್ನ ಪುಸ್ತಕದೊಳಗೇ ಕುಳಿತಿದೆ. ತಕ್ಕುದಾದ ಹೆಸರು ಸೂಚಿಸಿ please.

10 comments:

  1. ರೂಪಶ್ರೀಯವರೆ....

    ಕವನ ಓದಿ ಎಷ್ಟು ಖುಷಿಯಾಯಿತೆಂದರೆ...
    ಬಣ್ಣಿಸಲು ಶಬ್ಧಗಳಿಲ್ಲ...

    ಎಷ್ಟೋ ಬ್ಲಾಗ್ ನೋಡಿದ್ದೇನೆ..
    ಇಂಥಹ ಕವಿತೆಗಳನ್ನು ಓದಿಲ್ಲ...

    ಎಷ್ಟು ಸಹಜವಾಗಿ, ನೈಜವಾಗಿ ಬರೆದಿದ್ದೀರಿ...!
    ನಿಮಗೆ ನೀವೇ ಸಾಟಿ..

    ಕವಿತೆ ಓದುತ್ತಿದ್ದಂತೆ..
    ವಾಸ್ತವತೆಯ ಅನಾವರಣ...
    ಬಲು ಸೊಗಸಾಗಿದೆ...

    ಅಭಿನಂದನೆಗಳು...

    ನಿಮ್ಮ ಮಗುವಿಗೆ ನೀವೇ ಹೆಸರಿಡಿ...

    ReplyDelete
  2. ಚೆನ್ನಾಗಿದೆ...
    ನೀವೆ ಹೆಸರು ಇಟ್ಟರೆ ಚೆನ್ನ....

    ReplyDelete
  3. ರೂಪಾಶ್ರೀ...
    ವಾರೆವ್ಹಾ..! ಅದ್ಭುತವಾಗಿದೆ ಕವನ... ಎಲ್ಲಿಯೂ ಒತ್ತಾಯಕ್ಕೆ ಬಿದ್ದು ಬರೆದಂತೆ ಅನ್ನಿಸುವದಿಲ್ಲ... ಸಹಜವಾಗಿ, ಸುಲಲಿತವಾಗಿ ಮೂಡಿಬಂದ ಸಾಲುಗಳು... ತುಂಬಾ ತುಂಬಾ ಇಷ್ಟವಾಯ್ತು.... ಪ್ರಕಾಶ್ ರವರು ಹೇಳಿದಂತೆ ನಿಮ್ಮ ಮಗುವಿಗೆ ನೀವೇ ಹೆಸರಿಡೋದು ಚಲೋದು ಅನ್ಸತ್ತೆ...!

    ReplyDelete
  4. ಪ್ರಕಾಶ್ ರವರೆ,
    ಧನ್ಯವಾದಗಳು.. ನಿಮ್ಮ ಅಭಿಮಾನಕ್ಕೆ ಏನು ಹೇಳಬೇಕೋ ತಿಳಿಯುವುದಿಲ್ಲ..
    ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರೆಯಲಿ..

    ಸವಿಗನಸು,
    thanks :)

    ದಿಲೀಪ್ ರವರೆ,
    ನಿಜ ನೀವು ಹೇಳಿರುವುದು.. ಕೆಲವು ಕವನಗಳು ತುಂಬಾ ಸಹಜವಾಗಿ ಮೂಡುತ್ತವೆ.. ಕೆಲವಕ್ಕೆ ತುಂಬಾ ಪ್ರಯಾಸವಾಗುತ್ತವೆ..
    ನೀವು ಭಾವಿಸಿ ಓದುವಿರಾದ್ದರಿಂದ ನಿಮಗೆ ಇದು ಗೊತ್ತಾಗಿಹೋಗಿದೆ...!!! :)


    ಹೆಸರು ಸಿಕ್ಕರೆ ನಿಮಗೆಲ್ಲ ತಿಳಿಸುವೆ.. thanku :)

    ReplyDelete
  5. ಸುಲಲಿತವಾದ ಕವನ, ತುಂಬಾ ಚೆನ್ನಾಗಿದೆ.... ನಾನಾಗಿದ್ದರೆ '' ಮರೀಚಿಕೆ'' ಅಂತ ಹೆಸರಿದುತ್ತಿದ್ದೆ....

    ReplyDelete
  6. ರೂಪಾಶ್ರೀಯವರೆ...

    "ಅನಾವರಣ", ಅಂತರ, ಅಂತರಂಗ, ಅಂತರಾಳ...

    ಇವೆಲ್ಲ ಹೆಸರುಗಳು ಹೇಗಿವೆ ನಿಮ್ಮ ಕವಿತೆಗೆ?

    ReplyDelete
  7. tumba chennagide kavana... vibhinnateyannu beerutte..

    ReplyDelete
  8. ರೂಪಾಶ್ರೀ ಅವರೇ....

    ತಡವಾಗಿ ಬ೦ದಿದ್ದಕ್ಕೆ ಕ್ಷಮೆ ಇರಲಿ.... ಕವನ ಎ೦ದಿನ೦ತೆ ಸು೦ದರವಾಗಿದೆ....

    ಎಲ್ಲೂ ಸ೦ದೇಹ ಮೂಡಿಸದೇ ಸರಾಗವಾಗಿ ಓದಿಸಿಕೊ೦ಡು ಹೋಗುವ ಕವನ ಶೈಲಿ ನಿಮ್ಮದು....

    "ಒಳಗೆ-ಹೊರಗೆ" ಅ೦ತ ನನಗೆ ಅನಿಸಿತು ಕವನ ಓದಿ ಮುಗಿಸಿದಾಗ... :)

    ReplyDelete