October 12, 2009

ಬಳಲಿಹೆನು

ನಡುರಾತ್ರಿಯಲಿ ತಲೆದಿಂಬು
ಬಿಸಿಕಂಬನಿಗಳಲಿ ತೊಯ್ದಿತ್ತು
ಜೀವನದಲಿ ನಾನಿಟ್ಟ ಇಂಬು
ಹಸಿಯಿದ್ದಾಗಲೇ ಬೆಂದಿತ್ತು

ಕಾವಿತ್ತು ಮೊಳೆಸಿತು ಎಳೆಬಿಸಿಲು,
ಬೆಚ್ಚಗಿನ ಪ್ರೀತಿ ಮಡಿಲಲಿ.
ಕಾಯಿಸಿ ಅಳಿಸಿತು ರಣಮುಗಿಲು,
ಬಿಸಿ ಕಂಬನಿ ಕಡಲಲಿ.

ನುಣುಪಾಯಿತು ಒರಟು ಕೆನ್ನೆಗಳು
ಹರಿದ ಕಂಬನಿಗಳಿಂದ
ನೆನಪಾಯಿತು ಸವಿನೆನ್ನೆಗಳು
ಹರಿದ ಮನಗಳಿಂದ

ಕಡಲಿನ ಚಂಡಮಾರುತವು
ಜೊತೆಯುಂಟು ನನಗೆ,
ಸಾಗುವುದು ಪಯಣವು
ಹುಟ್ಟು ನನದಲ್ಲ, ಮುಳುಗಿಸಲಿ ಹೇಗೆ???


5 comments:

  1. ಚೆನ್ನಾಗಿದೆ ಕವನ...

    ReplyDelete
  2. ''ನುಣುಪಾಯಿತು ಒರಟು ಕೆನ್ನೆಗಳು ಹರಿದ ಕಂಬನಿಗಳಿಂದ'' , ''ಸಾಗುವುದು ಪಯಣವು ಹುಟ್ಟು ನನದಲ್ಲ, ಮುಳುಗಿಸಲಿ ಹೇಗೆ???'' ತುಂಬಾ ತುಂಬಾ ಚೆನ್ನಾಗಿದ್ದ ಸಾಲುಗಳು..... ಕವನ ತುಂಬಾ ಚೆನ್ನಾಗಿದೆ............

    ReplyDelete
  3. thanku.. naanu tumba bhaavisi bareda kavanagalalli idoo ondu..

    ReplyDelete
  4. ಅದು ಹೇಗೆ ಬರಿತೀರಿ ರೂಪ ಅವರೇ ಇ೦ತಹ ಸೊಗಸಾದ ಕವನಗಳನ್ನು.... ಹ್ಯಾಟ್ಸ್ ಆಫ್ ಟು ಯು....

    ReplyDelete