January 9, 2010

ಸ್ಮಶಾನವಾಸಿ

ಆಸ್ವಾದಿಸುವ ಪ್ರಕೃತಿಯ
ಅನುಭವಿಸುವ ಕ್ರೂರಿಗಳು
ಗಿಡಮರ ಕಾಯಿಪಲ್ಲೆಗಳು
ಪ್ರಾಣಿಪಕ್ಷಿ ಚಂದ್ರತಾರೆಗಳು
ಎಲ್ಲದರಲ್ಲೂ ಲಾಭವೆಣಿಸುವಿರಿ
ಹಿಂಡಿ ಹೀರಿ ನಿಸ್ಸಾರವಾದೊಡನೆ
ಒಗೆದು ತುಳಿದು ಮುನ್ನಡೆಯುವಿರಿ
ಕದುಪಾಪಿಗಳು ನೀವು
ಅಮಾನವೀಯ ಮಾನವರು...

ನಿಮಗೆಲ್ಲ ಅಪವಾದ ನಾನು
ಸ್ಮಶಾನ ಕಾಯುವವನು
ನಿರ್ಲೋಭಿ, ನಿರ್ಮೋಹಿ,
ನಿಸ್ವಾರ್ಥಿ!

ಬಡಿದಾಡಿ ನೀವೆಲ್ಲರೂ
ಸಂಗ್ರಾಮವಾಗಲಿ ನಿಮ್ಮಲ್ಲಿ
ಸತ್ತುಹೋಗಿ ಸ್ವಾರ್ಥಿಗಳೇ
ನಿಮ್ಮೆಲ್ಲರನೂ ಹೂತುಬಿಡುವೆ
ಕಡುಬಡವ ನಾನು
ಹಸನಾಗಲೆನ್ನ ಬದುಕು...


ತಪ್ಪಿರುವ ಹಾದಿಯಲ್ಲಿ ಸರಿಯಾಗಿ ನಡೆಯುವುದೇ ತಂತ್ರಜ್ಞಾನ!!
ಕಾಲೇಜಿನಲ್ಲಿ ethics ಬಗ್ಗೆ ತಿಳಿಸುವಾಗ ನನ್ನಲಿ ಮೂಡಿದ
ಧ್ವಂಧ್ವದ ಕೂಸೇ ಈ ಕವಿತೆ.. ನಾಲ್ಕು ವರ್ಷ ಕಲಿತದ್ದು ಏತಕ್ಕೆ ಎಂಬ ತರ್ಕವೇ ಮುನ್ನುಗ್ಗಿ ಕವಿತೆಯಾಯಿತು.. ಸರಿ-ತಪ್ಪುಗಳನ್ನು ಮುಂದಿಟ್ಟು ದಾರಿ ಕಂಡುಕೊಳ್ಳಿ ಅಂತ ಹೇಳಿ ಕಾಲೇಜಿಂದ ಹೊರಹಾಕಿಬಿಟ್ಟರು...!!!

6 comments:

  1. ಸಾಲು ಸಾಲುಗಳು ಮನುಷ್ಯನ ಸ್ವಾರ್ಥಕ್ಕೆ ಹಿಡಿದ
    ಕನ್ನಡಿಯಂತಿದೆ,
    ಒಳ್ಳೆಯ ಕವನ
    ಹೀಗೆಯೇ ಬರೆಯುತ್ತಿರಿ

    ReplyDelete
  2. ರೂಪಶ್ರೀ, ಬೆಳಿಯುತ್ತಿರುವ ನಮ್ಮ ತಿರಸ್ಕಾರಕ್ಕೆ ನಿನ್ನ ಕವನಿಸಿದ ತಿರಸ್ಕಾರ ವ್ಯವಸ್ಥೆಯ ಬಗ್ಗೆ ...ಚನ್ನಾಗಿದೆ...‘ಕಡು ಪಾಪಿಗಳು....‘ ಇರಬೇಕಿತ್ತು...ಅಲ್ಲವಾ?

    ReplyDelete
  3. ರೂಪಶ್ರೀ,
    ಸುಂದರವಾದ ಕವನ...ಅಭಿನಂದನೆಗಳು...
    ನಿಮ್ಮವ,
    ರಾಘು

    ReplyDelete
  4. hoogaLu ee ninna kavithege saavira salaam hELuttaveyEno.....
    sumne haadu hOguvaaga olle hoo kandre adanna thamma camera/kaNNalli capture madkondu muNde hoguvavareShtu?
    adE hoovanna nODida takshaNave ketthu ondu ketta cute expression kottu 5 nimsha aadmele mulaajE ilde hoskhaaki hOguvavareShtu?

    ReplyDelete
  5. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

    ReplyDelete