August 26, 2009

ಕಡೆಮಾತು

ಹೋಗುವವರಿಗೆ ನಾ ಹೇಳಿದೆ,
ನಗುವಿತ್ತು ಹೋಗದಿರಿ
ಆವರಿಸುವ ಮೌನವ ಸಹಿಸಲಾರೆ...
ಮೌನವಿತ್ತು ಹೋಗದಿರಿ
ಉದ್ಭವಿಸುವ ಪ್ರಶ್ನೆಗಳಿಗೆ
ಉತ್ತರಿಸಲಾರೆ...
ಕಂಬನಿಯಿತ್ತು ಹೋಗಿ
ಸಿಗುವ ಉತ್ತರಗಳ
ದಾರಿ ಕಾಯುವೆ...
ಮಾಸದ ನೆನಪುಗಳೊಂದಿಗೆ...
ಮಾಗದ ಗಾಯಗಳೊಂದಿಗೆ...

8 comments:

  1. ಹೊಟ್ಟೆಕಿಚ್ಚಾಗುವಷ್ಟು ಚಂದವಾಗಿ ಬರೆಯುತ್ತೀರಿ....

    ನಿಮ್ಮ ಕವನಗಳು ಅಂದವಾದ ಬಣ್ಣದ ಚಿತ್ರಗಳಂತೆ...
    ಮನಸ್ಸಿನ ಭಾವನೆಗಳನ್ನು ಸುಂದರವಾಗಿ ಬಿಡಿಸಿಡುತ್ತೀರಿ...

    ತುಂಬಾ ಖುಷಿಯಾಗುತ್ತದೆ...

    ಅಭಿನಂದನೆಗಳು...

    ReplyDelete
  2. ನಿಮ್ಮ ಬ್ಲಾಗಿಗೆ ಒ೦ದೆರಡು ಬಾರಿ ಬ೦ದುಹೋಗಿದ್ದೇನೆ.... ನಿಮ್ಮ ಬ್ಲಾಗಿನಲ್ಲಿ ನನಗೆ ಕನ್ನಡ ಅಕ್ಷರಗಳೇ ಕಾಣಿಸುವುದಿಲ್ಲ... ಅದರ ಬದಲು ಕೆಳಗೆ ಕೊಟ್ಟಿರುವ ಹಾಗೆ ವಿಚಿತ್ರ ಫಾ೦ಟ್ ಕಾಣಿಸುತ್ತದೆ.

    ¸ÀzÀ £É£À¥ÀÅUÀ¼ÉÆA¢UÉ...

    ªÀiÁUÀzÀ UÁAiÀÄU

    ನೀವು ಕನ್ನಡವನ್ನು ಯಾವ ಸಾಫ್ಟ್ ವೇರ್ ಉಪಯೋಗಿಸಿ ಟೈಪ್ ಮಾಡುತ್ತೀರಾ?

    ReplyDelete
  3. IE upayogisidaru haage kaanisuththide roopa avare... vichithra vichithra fonts....

    aadre nange ulidavaru bareda comments kannadadalle kaanisuththide...

    nimma "hoomana" kavana kooda odalu saadyavaaguththide... ulida yaava kavanagalu kannadadalli kaanasiguththilla :(

    ReplyDelete
  4. ಭಾವಪೂರ್ಣ ಕವನ....
    ತುಂಬಾ ಇಷ್ಟವಾಯಿತು.....
    ಅಭಿನಂದನೆಗಳು.

    ReplyDelete
  5. ಕವನ ಚೆನ್ನಾಗಿದೆ. ಎದು ಕೊಡಿ ಇದು ಕೊಡಿ ಎಂದು ಕೇಳುತ್ತಾರೆ ಆದರೆ "ಕಂಬನಿಯಿತ್ತು ಹೋಗಿ" ಎಂಬ ಮಾತು ಕಾಡೂತ್ತಿದೆ...

    ReplyDelete
  6. ರೂಪಾಶ್ರೀ ಅವರೇ...

    ಕೊನೆಗೂ ನಿಮ್ಮ ಕವನವನ್ನು ನೋಡುವ೦ತಾಯಿತು. ಕಾದಿದ್ದಕ್ಕೆ ಸಾರ್ಥಕವಾಯಿತು ಅನ್ನುವ೦ತಿದೆ ನಿಮ್ಮ ಕವನ. ಖ೦ಡಿತಾ ಉತ್ಪ್ರೇಕ್ಷೆ ಅಲ್ಲ... ಮನಸಿಗೆ ತಟ್ಟಿತು ಮತ್ತು ಒ೦ದು ಸಲ ಯೋಚಿಸುವ೦ತೆ ಮಾಡಿತು.

    ಹೌದು ಬಿಟ್ಟು ಹೋಗುವವರು ನಗುವನ್ನು ಬಿಟ್ಟು ಹೋದರೆ ಮು೦ದಾವರಿಸುವ ಮೌನ, ಅದರಿ೦ದಾವರಿಸುವ ಪ್ರಶ್ನೆಗಳಿಗೆ ಉತ್ತರ ಕೊಡುವುದು, ಸಹಿಸುವುದು ತು೦ಬಾ ಕಷ್ಟ.

    ಮು೦ದಿನ ಕವನಗಳಿಗೆ ಕಾಯುತ್ತೇನೆ....

    ReplyDelete
  7. ಸಂಕ್ಷಿಪ್ತತತೆಯನ್ನು ರೂಪಿಸಿ ಅದಕ್ಕೆ ಆವರಣ ಕೊಟ್ಟು ಪದ ಬಳಕೆಯ ಜಾಣ್ಮೆ ತೋರುವ ಕವನಗಳು ಮನಸಿಗೆ ನೇರ ನಾಟುತ್ತವೆ. ಮುಂದುವರೆಯಲಿ ರೂಪಶ್ರೀ ಕೃಷಿ ಖುಷಿ ಕೊಡುವ ಹೂಬನದಿ.

    ReplyDelete