October 5, 2009

ಅಂತಿಮ ಅತಿಥಿ

ಸಾಗರದ ಮಧ್ಯದಲಿ ನಿಂತು ನೀನು
ಬಾಯಾರಿಕೆಯಿಂದ ಬಳಲಿದರೆ
ನಿನಗಾಗಿ ಉಳಿಯುವ ಪನ್ನೀರು ನಾನು.

ಗೆಜ್ಜೆನಾದದಲ್ಲಿ ನೀನು
ಅಪಸ್ವರವ ನುಡಿಸಿದರೆ
ನಿನಗಾಗಿ ಹೊರಡುವ ನಿನಾದ ನಾನು.

ಸಂಗಾತಿಯ ಸರಸದಲಿ ನೀನು
ಹುಳಿ ವಿರಸವ ಸವಿದರೆ
ನಿನಗಾಗಿ ಕಾಯುವ ಸಂಗಾತಿ ನಾನು.

ಪ್ರಶ್ನೆಗಳ ವ್ಯೂಹದಲಿ ನೀನು
ಒಂಟಿಯಾಗಿ, ಉತ್ತರ ಕಾಣದಿದ್ದರೆ
ನಿನಗಾಗಿ ಉತ್ತರವಾಗುವ ಪ್ರಶ್ನೆ ನಾನು.

ಸುಖ-ಶಾಂತಿ ಕೇಳದಿರು ನೀನು
ನಿನ್ನೆಡೆಗೆ ಬರುವಾಗ ನಾನು,
ಸ್ವಾರ್ಥಿಯಾಗಿರು, ಶಾಂತಿ ನಿನಗಷ್ಟೆ!!!


8 comments:

  1. ಮತ್ತೊಂದು ಸುಂದರ ಕವನ...
    "ನಿನಗಾಗಿ ಉತ್ತರವಾಗುವ ಪ್ರಶ್ನೆ ನಾನು" ಸಕತ್ ಇಷ್ಟವಾಯ್ತು..

    ಆದ್ರೆ, "ಒಂಟಿಯಾಗಿ, ಉತ್ತರ ಕಾಣದೆಯಾದರೆ" ಇಲ್ಲಿ ಕಾಣದೆಯಾದರೆ ಬದಲಿಗೆ "ಕಾಣದೆ ಹೋದರೆ" ಅಥವಾ "ಕಾಣದಿದ್ದರೆ" ಅಂತಿದ್ದರೆ ಚೆನ್ನಾಗಿರ್ತಿತ್ತೇನೋ ಅಂತ ನನ್ನ ಅನಿಸಿಕೆ...

    ಧನ್ಯವಾದಗಳು...

    ReplyDelete
  2. very nice kavana..... i feel its straight from the heart.........

    ReplyDelete
  3. ಗೆಜ್ಜೆನಾದದಲ್ಲಿ ನೀನು
    ಅಪಸ್ವರವ ನುಡಿಸಿದರೆ
    ನಿನಗಾಗಿ ಹೊರಡುವ ನಿನಾದ ನಾನು.

    ಈ ಸಾಲುಗಳು ತು೦ಬಾ ಹಿಡಿಸಿದವು ರೂಪಾಶ್ರಿ ಅವರೇ... ನಿಮ್ಮ ಕವನಗಳನ್ನು ಓದುವುದೇ ಒ೦ದು ಖುಷಿ.... ಗು೦ಗು ಹಿಡಿಸುವ ಕವನಗಳು....

    ReplyDelete
  4. ರೂಪಶ್ರೀ, ನಿಮ್ಮಲ್ಲಿಯ ಕವಿಯಿತ್ರಿ ಕೆರಳಿ ತನ್ನ ಪ್ರತಿಭೆಯನ್ನು ಎರಚಿದಂತಿವೆ ಸಾಲುಗಳು
    ಪ್ರಶ್ನೆಗಳ ವ್ಯೂಹದಲಿ ನೀನು
    ಒಂಟಿಯಾಗಿ, ಉತ್ತರ ಕಾಣದೆಯಾದರೆ
    ನಿನಗಾಗಿ ಉತ್ತರವಾಗುವ ಪ್ರಶ್ನೆ ನಾನು.
    ಇದು ಬಹು ಮೆಚ್ಚುಗೆಯಾದದ್ದು..ಅವನಿಗೆ ಪ್ರಶ್ನೆ ಆದರೂ ಅವಳ ಮೂಲಕ ಅವನಿಗೆ ಉತ್ತರ...ಎಂತಹ ಕಲ್ಪನೆ...!!!
    ನಿಮ್ಮ ಕವನಿಕೆಗೆ- ಅಭಿನಂದನೆಗಳು..

    ReplyDelete
  5. dileep, ನಿಮ್ಮ ಸಲಹೆಗೆ ಧನ್ಯವಾದಗಳು :) ನನಗೂ ಅದು ಹೆಚ್ಚು ಸರಿ ಅಂತ ಅನ್ನಿಸಿತು ಅದಕ್ಕೆ ಬದಲಾಯಿಸಿದ್ದೇನೆ

    ReplyDelete
  6. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ತುಂಬು ಮನದ thanks :)

    ReplyDelete