October 29, 2009

ಮನಸ್ಸೆರಡು ಕನಸೊಂದು!


ಹೂಗಳಿಗೆ ಮುತ್ತಿಟ್ಟು
ಇಬ್ಬನಿಯ ಕದ್ದಿದ್ದ
ಈಗವನ ಗುರಿ
ನನ್ನ ಕೆಂಪು ಕೆನ್ನೆಗಳು!


ಹೊರಳಾಟವೇ ನಡೆದಿತ್ತು
ಮುಸುಕು ಹೊದ್ದು,
ನನ್ನಷ್ಟಕ್ಕೇ ನಗುತ್ತಿದ್ದೆ
ಸವಿಗನಸ ಮೆಲಕುತ್ತಾ!


ಬೀಪ್! ಬಿತ್ತೊಂದು ಮೆಸೇಜು
ನಿನ್ನಂಥ ಗೆಳತಿ ಇನ್ನಿಲ್ಲವೆಂದು
ಎದುರೆರಡು ಮಾತೂ ಆಡದ
ಮಾಸಿದ ನೆನಪಿನವಳದು!


ಧಾರಾವಾಹಿಯ ಕಂತಾಗಿತ್ತು
ನನ್ನ ಸವಿಗನಸು...
ಮತ್ತೆ ನೆನೆದೆನು, ಕನಸಿನಲಿ
ಸುರಿದ ಪ್ರೇಮಸಿಂಚನದಲಿ!


ಹಿಡಿದ ಕೈ ಬಿಡಿಸಿ ಓಡಿದ್ದೆ,
ತಾಳದೆ ಅವನ ಬಿಸಿಯುಸಿರ..
ಅರೆಗಣ್ಣಲಿ ಮಿಸುಕಾಡಿದೆ
"ಈ ಕೈ ನಿನದೇ ಕಣೋ!"


ರಮಿಸುತಲೇ ಸೋಲುತಿತ್ತು
ಕೆಂಗೆನ್ನೆಗಳಿಗೆ ಕೆಂಗಣ್ಣುಗಳು
ಕೈ ಹಿಡಿಯುವಷ್ಟರಲೇ,
ರಿಂಗಣಿಸಿತು ಹಾಳು ಮೊಬೈಲು!


"ಕ್ಷಮಿಸೋ", ಮತ್ತವನ ರಮಿಸಲಾರೆ
ನಿರಾಸೆಗಣ್ಣಲಿ ಕಿವಿಗಿಟ್ಟೆ ಅದನ್ನು
"_______" ಸೇಬೂ ನಾಚಿತ್ತು ನನ್ನ ನೋಡಿ
"ಲೇ ಹುಡುಗಿ, ಕನಸಿನಲ್ಲೂ, ಓಡಿದೆಯಲ್ಲೇ!!"


6 comments:

  1. wah tumba khushi koduva kavana. bhavaneya navirate tumbaa naviraagide:):)

    ReplyDelete
  2. Wah Wah Wah....

    Thumba chennagide....

    ide comment keli keli bore aagalla thaane :)

    ReplyDelete
  3. ರೂಪಾಶ್ರೀಯವರೆ...

    ವಾಹ್....!
    ಇದು ರೊಮ್ಯಾಂಟಿಕ್ ಕವನ...!

    ಇಂದಿನ ಭಾವಗಳು... ಸಂತಸಗಳು ಶಬ್ಧವಾಗ ಬೇಕು...!

    ಚಂದದ ಕವಿತೆಗೆ
    ಸುಂದರ ಭಾವಗಳಿಗೆ...ಅಭಿನಂದನೆಗಳು..

    ReplyDelete
  4. ಆತ್ಮೀಯ

    ವಾಹ್ ವಾಹ್... ಮಸ್ತ್..
    ಮೊದಲ ನಾಕು ಸಾಲುಗಳನ್ತೂ ಸೂಪರ್..

    (ಹಾಲು = ಹಾಳು ಮಾಡಿ. )

    ReplyDelete
  5. ellarigoo dhanyavaadagaLu :)
    Chrome balasuvudarinda kannada type maaduvudu kashta kshame irali.. eega badalaayisiddene!

    ReplyDelete