November 6, 2009

ಬದಲಾವಣೆ

ಅಂದು, ಕಥೆ-ಕವಿತೆಗಳನು ಓದುತ್ತಿದ್ದೆ
ಬಣ್ಣದ ಪದಗಳ ಕಂಡಿದ್ದೆ
ಅವುಗಳ ಪುಳಕಗಳನು
ಅನುಭವಿಸಿದ್ದೆ, ಆದರೆ
ಭಾವನೆಗಳನ್ನಲ್ಲ!


ಮುಂದೆ, ನಾನೂ ಬರೆದೆ,
ಪುಟಗಳಂತೆ.
ಪದಗಳ ಪೋಣಿಸಿ
ಮಾಲೆಯನಾಗಿಸಿದೆ,
ಸುವಾಸನೆ?
ಸಿಕ್ಕಿರಲಿಲ್ಲ, ಎಂದೆಂದಿಗೂ.
ಆದರೂ ತೃಪ್ತಿಯ ತುದಿ,
ಗೆಲುವಿನ ಅಹಂಭಾವ!!


ಇಂದು, ಸೋತು ನಿಂತಿರುವೆ,
ಭಾವನೆಗಳ ಉತ್ತುಂಗದಿ,
ಪರಿಮಳವ ತುಂಬಲು
ಪದಗಳೇ ಸಾಲದು
ಎರಡು ಪದಗಳ ಜೋಡಿಸಲೂ
ಸೋತಿಹೆನು , ಪುಟವೆಲ್ಲಿಯದು?
ಹಾಳೆಯೆಲ್ಲ ಖಾಲಿ,
ಬರೆದ ಪದಗಳಲೂ ಅತೃಪ್ತಿ!
ಆದರೂ ಎಂಥದೋ ಸಂತಸ,
ಸೋಲಿನಲೂ ಪರಿಪೂರ್ಣತೆ.

-ಸೋತು ಗೆದ್ದವಳು!!!

9 comments:

  1. ರೂಪಾ,
    ಭಾವನೆಗಳ ಉತ್ತುಂಗದಿಯಲಿ
    ಪರಿಮಳವ ತುಂಬಲು ಹೊರಟರೆ
    ಪದಗಳೇ ಸಾಲದು.....ಇದು ನಿಜ
    ಚೆಂದದ ಕವನ......
    ಸೊಗಸಾಗಿದೆ.......

    ReplyDelete
  2. ರೂಪಾ,
    ಮೊದಲ ಬಾರಿಗೆ ನಿಮ್ಮ ಬ್ಲಾಗ್ ಗೆ ಬಂದೆ, ಸುಂದರ ಕವಿತೆ ಕಂಡಿತು,
    ಚೆನ್ನಾಗಿ ಬರೆದಿದ್ದಿರಾ

    ReplyDelete
  3. ರೂಪಾ ಶ್ರೀ ಅವರೇ....

    ಕವನ ಬರೆಯುವಾಗ ಈ ಎಲ್ಲಾ ಮಜಲುಗಳನ್ನು ದಾಟಿ ಬರಬೇಕಲ್ಲ.... ನಿಮ್ಮ ಕವನಗಳು ಬೇರೆ ಬೇರೆ ಅರ್ಥ ಹೊರಹೊಮ್ಮಿಸುತ್ತದೆ... ಅದಕ್ಕೆ ಕೆಲವೊಮ್ಮೆ ನಿಮ್ಮ ಕವನ ಸರಿಯಾಗಿ ಅರ್ಥ ಮಾಡಿಕೊ೦ಡಿದ್ದೇನೋ ಇಲ್ಲವೋ ಎ೦ದು ಸ೦ಶಯ ಬ೦ದು ಮತ್ತೊಮ್ಮೆ ಓದಿನೋಡುತ್ತೇನೆ :)

    ReplyDelete
  4. ಪ್ರಯತ್ನ ಪಡಬೇಕು.. ಸೋತೆ ಅಂತ ಬೇಸರಗೊಂಡು ಕುಳಿತು ಬಿಟ್ರೆ ಆಗಲ್ಲ..
    ಸೋಲಿನಲ್ಲೂ ಪರಿಪೂರ್ಣತೆಯ ಸಂತಸ ಕಂಡ ನೀವೇ ಧನ್ಯ.. ಎಲ್ಲರಿಂದ ಆಗುವಂತಾದ್ದಲ್ಲ ಇದು..
    ಇನ್ನಷ್ಟು ಸುಂದರ ಕವನಗಳು ಬರಲಿ...

    ReplyDelete
  5. ninna sOlige dakkida geluvu ellavannooo meerisiduu
    verrrrry happy fa ya :)

    ReplyDelete
  6. ರೂಪಾಶ್ರೀ...

    ನಿಮ್ಮ ಕವಿತೆಗಳಿಗೆ ನೀವೇ ಸಾಟಿ...

    ಶಬ್ಧಗಳನ್ನು ಬಹಳ ಸಹಜವಾಗಿ..
    ಅದರ ಭಾವಗಳಿಗೆ ಜೋಡಿಸಿ
    ಸುಂದರವಾದ ಚಿತ್ರಣವನ್ನು ನಮ್ಮ ಮುಂದೆ ಇಡುತ್ತೀರಿ...

    ಅಭಿನಂದನೆಗಳು...

    ಪ್ರಕಾಶಣ್ಣ..

    ReplyDelete
  7. nimmellara abhimaanakke dhanyavaadagalu.. tumba dinagala nantara pratikrayisuttiruvudakke sorry!!

    ReplyDelete
  8. tumbaa sogasagide.bhaavanaatmakavaagide.

    ReplyDelete