July 20, 2009

ಹೂಮನ


ನಸುಕಿನ ಅರುಣೋದಯದಲಿ
ಕಲೆಸಿಟ್ಟ ಪನಿಗಳನು ಮುತ್ತಾಗಿಸಿ,
ಕಾದಿದ್ದಳು, ಕಣ್ತೆರೆಯುತ ಗೆಳೆಯನಿಗಾಗಿ.
ತನ್ನ ಒನಪು ಒಯ್ಯಾರವ ಪಡೆವ,
ತುಟಿಯಂಚಿನಲಿ ನಗೆತರುವವನಿಗಾಗಿ.
ಮುಂಜಾವಿನ ಚಳಿಯಲ್ಲಿ
ವಿರಹದ ಬೆಂಕಿಯ ತಣಿಸುವ,
ಕೆಂಗಣ್ಣಿನ ಕೆಂಡದೊಡಲ ಕಲೆಗಾರನಿಗಾಗಿ.


ಕೋರೈಸುವ ತನು ಕಂಪಿಸಿತು,
ಇಣುಕಿದ ಅವನ ಕಣ್ಣೋಟಕೆ.
ಎದೆಯಾಳದ ಪ್ರೀತಿಯನು,
ಅಲೆಅಲೆಯಾಗಿ ಪಲ್ಲವಿಸಿದನು.
ಎಡತಾಕಿದ ತರಂಗಗಳಿಗೆ,
ತರಗೆಲೆಯಾಗಿ ತಲ್ಲಣಿಸಿದಳು.
ನಸುನಕ್ಕು ನಾಚಿನಿಂದವಳಿಂದ
ಕದ್ದನಾ ಸವಿ ಮುತ್ತನು!
ಆ ಬೆಚ್ಚಗಿನ ಚುಂಬನಕೆ
ಮೈಚೆಲ್ಲಿ ಮೊಗವರಳಿಸಿ ನಿಂತಳು,
ಸೋತು, ಆ ನಗುವಿನಾಳದ ಪ್ರೇಮಕೆ,
ಲೀನನಾದನು, ಅರಳಿದ ಮೊಗದಲ್ಲಿ.


3 comments:

  1. ವಾಹ್..!

    ಬಹಳ ಸುಂದರವಾಗಿದೆ...
    ಪ್ರಕ್ರತಿ, ಪ್ರೇಮ ಭಾವಗಳನ್ನು..
    ಶಬ್ದಗಳಲ್ಲಿ ಸೆರೆ ಹಿಡಿದಿಟ್ಟಿದ್ದೀರಿ...

    ಅಭಿನಂದನೆಗಳು...
    ಚಂದದ ಕವಿತೆಗೆ...

    ReplyDelete
  2. ಹೂಮನ, ಕೋಮಲತೆ ಮತ್ತು ಮುಗ್ಧತೆಗೆ ಪ್ರತೀಕ ಆದ್ರೆ ಭಾಸ್ಕರನಿಗೆ ಕಾಯುವ ಸೂರ್ಯಮುಖಿಯಂತೆ...ತೀಕ್ಷ್ಣತೆಯನ್ನು ಕಾಯುವ ಕೋಮಲತೆ...ಎಂತಹಾ ಆಕರ್ಷಣೆ...ಚನ್ನಾಗಿವೆ ಸಾಲುಗಳು ರೂಪಾಶ್ರೀ, ಮುಂದುವರೆಸಿ...ಬೆನ್ನುತಟ್ಟಲು ನಾವಿದೀವಿ...

    ReplyDelete
  3. ಚೆನ್ನಾಗಿದೆ. ಸೂರ್ಯೋದಯಕ್ಕೆ ಕಾಯುವ ನೀರ ಮುತ್ತಿನ ಹನಿ(ಮಣಿ)ಗಳು ಮತ್ತು ಪ್ರೇಮವನ್ನು ಜೊತೆಜೊತೆಯಲ್ಲೇ ವರ್ಣಿಸಿರುವಿರಿ. ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥ. ಇಷ್ಟವಾಯಿತು.

    ReplyDelete